ಬಿಜೆಪಿ ಆಡಳಿತದ ರಾಜ್ಯಗಳ ಸಂಖ್ಯೆ 22ಕ್ಕೆ ಏರಿಕೆ ಆಗಲಿದೆ: ಬಿಎಸ್‌ವೈ | Oneindia Kannada

2018-01-19 19

ಈ ವರ್ಷ ಮುಗಿಯುವಷ್ಟರಲ್ಲಿ ಕರ್ನಾಟಕ ಸೇರಿದಂತೆ 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಏರಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹೇಳಿದರು.

ಮದ್ದೂರಿನಲ್ಲಿ ಆಯೋಜಿತವಾಗಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಕಾಂಗ್ರೆಸ್ ಅಧಿಕಾರದಲ್ಲಿದ್ದುದು 18 ರಾಜ್ಯಗಳಲ್ಲಿ, ಈಗ ಬಿಜೆಪಿ 19 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ವರ್ಗಾವಣೆಯನ್ನು ದಂದೆಯನ್ನಾಗಿ ಮಾಡಿಕೊಂಡಿದ್ದು, ಚುನಾವಣೆಗೆ ಹಣ ಕ್ರೂಡೀಕರಣ ಮಾಡುವ ಕಾರ್ಯದಲ್ಲಿ ನಿರತವಾಗಿದೆ ಎಂದು ಅವರು ಆರೋಪಿಸಿದರು.ರಾಜ್ಯದಲ್ಲಿ ಪ್ರತಿದಿನ ಕೊಲೆ, ಸುಲಿಗೆ ಅತ್ಯಾಚಾರ ಸಾಮಾನ್ಯವಾಗಿಬಿಟ್ಟಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಈ ಬಗ್ಗೆ ಹೈಕೋರ್ಟ್ ಸಹ ಅಸಹನೆ ವ್ಯಕ್ತಪಡಿಸಿದ್ದು, ಹೈಕೋರ್ಟ್ ನ್ಯಾಯಮೂರ್ತಿಗಳು ರಾಜ್ಯ ಸರ್ಕಾರಕ್ಕೆ ತಪರಾಕಿ ಹಾಕಿದ್ದಾರೆ ಎಂದರು.ವೇದಿಕೆಯಲ್ಲಿದ್ದ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಅವರ ಬಗ್ಗೆ ಮಾತನಾಡಿದ ಯಡಿಯೂರಪ್ಪ ಅವರು, ಕೃಷ್ಣ ಅವರು ಹಿರಿಯರಾಗಿದ್ದು, ಅವರಿಗೆ ಬಿಜೆಪಿಯ ಅಭಿವೃದ್ಧಿ ಪರ ಚಿಂತನೆಗಳು ಅರ್ಥವಾಗಿದೆ ಹಾಗಾಗಿ ನಮಗೆ ಬೆಂಬಲ ನೀಡುತ್ತಿದ್ದಾರೆ
Yediyurappa has confidence that within this year BJP will be the ruling government in 22 states of the country including Karnataka

Videos similaires